ನವದೆಹಲಿ,ಡಿ.26 (DaijiworldNews/HR): ಫಾಸ್ಟ್ಟ್ಯಾಗ್ ಮೂಲಕ ಟೋಲ್ ಸಂಗ್ರಹದ ಪ್ರಮಾಣ ಇದೇ ಮೊದಲ ಬಾರಿ ಒಂದೇ ದಿನದಲ್ಲಿ 80 ಕೋಟಿ ರೂಪಾಯಿ ದಾಟಿದ್ದು, ಡಿಸೆಂಬರ್ 24ರಂದು ದಿನ 50 ಲಕ್ಷಕ್ಕೂ ಅಧಿಕ ವಹಿವಾಟುಗಳು ನಡೆದಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಭಾರತದಲ್ಲಿ ಇದುವರೆಗೂ 2.2 ಕೋಟಿ ಫಾಸ್ಟ್ ಟ್ಯಾಗ್ ಬಳಕೆದಾರರಿದ್ದು, ಜನವರಿ ಒಂದರಿಂದ ಈ ಸಂಖ್ಯೆಯಲ್ಲಿ ಇನ್ನು ಹೆಚ್ಚಿನ ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಫಾಸ್ಟ್ ಟ್ಯಾಗ್ಗಳು ದೇಶಾದ್ಯಂತ 30,000 ಪಿಒಎಸ್ ಗಳಲ್ಲಿ, 22ಕ್ಕೂ ಅಧಿಕ ಬ್ಯಾಂಕ್ ಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ಲಾಜಾಗಳಲ್ಲಿ, ಅಮೆಜಾನ್, ಫ್ಲಿಪ್ ಕಾರ್ಟ್, ಪೇಟಿ ಎಂನಂಥ ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಿವೆ.
ಇನ್ನು 2021ರ ಜನವರಿ 1ರಿಂದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ.