ನವದೆಹಲಿ, ಡಿ.26 (DaijiworldNews/HR): ಖ್ಯಾತ ಉರ್ದು ಕವಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಶಂಸುರ್ ರಹಮಾನ್ ಫಾರುಖಿ (85) ಅವರು ಅಲಹಾಬಾದ್ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ತಿಂಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಗುಣಮುಖರಾಗಿ ನವೆಂಬರ್ 23ರಂದು ಮನೆಗೆ ತೆರಳಿದ್ದರು.
ಶಂಸುರ್ ರಹಮಾನ್ ಫಾರುಖಿ ಅವರು 1935 ಸೆಪ್ಟೆಂಬರ್ 30ರಂದು ಉತ್ತರ ಪ್ರದೇಶದಲ್ಲಿ ಜನಿಸಿ, 16ನೇ ಶತಮಾನದ ಉರ್ದು ಮೌಖಿಕ ಕಥೆ ಹೇಳುವ ಕಲಾ ಪ್ರಕಾರವಾದ 'ದಸ್ತಂಗೊಯ್' ಅನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಇನ್ನು ಶಂಸುರ್ ರಹಮಾನ್ ಫಾರುಖಿ ಅವರು 18ನೇ ಶತಮಾನದ ಕವಿ ಮಿರ್ ತಖಿ ಮಿರ್ ಕುರಿತು ರಚಿಸಿದ ನಾಲ್ಕು ಸಂಪುಟಗಳ ಸಂಶೋಧನಾ ಕೃತಿ 'ಶೇರ್ ಇ ಶೋರ್ ಅಂಗೇಝ್'ಗೆ 1996ರಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕಾರ ಲಭಿಸಿದೆ.