ಉಳ್ಳಾಲ, ಡಿ. 26 (DaijiworldNews/MB) : ಬೈಕ್ನಲ್ಲಿ ಬಂದ ತಂಡವೊಂದು ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಚೂರಿ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಗಾಯಗೊಂಡವರನ್ನು ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್(27) ಎಂದು ಗುರುತಿಸಲಾಗಿದೆ.
ಘಟನೆ ನಡೆದ ಸಂದರ್ಭ ಈ ಯುವಕರಿಬ್ಬರು ಚರ್ಚೊಂದರಲ್ಲಿ ಕ್ಯಾಟರಿಂಗ್ನಲ್ಲಿ ಕೆಲಸಕ್ಕಿದ್ದ ತಮ್ಮ ಸಹೋದರನನ್ನು ಕರೆ ತರಲು ತೆರಳಿದ್ದರು.
ಈ ಸಂದರ್ಭ ಹಿಂದಿನಿಂದ ಬೈಕ್ನಲ್ಲಿ ಬಂದ ಅಪರಿಚಿತರು ಯುವಕರಿದ್ದ ಬೈಕ್ಗೆ ಢಿಕ್ಕಿ ಹೊಡೆದಿದ್ದು, ಇಬ್ಬರು ಯುವಕರು ರಸ್ತೆಗೆ ಎಸೆಯಲ್ಪಟ್ಟರು. ಆ ಬಳಿಕ ಇಬ್ಬರಿಗೂ ಆ ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಇರಿದಿದ್ದಾರೆ. ಓರ್ವನಿಗೆ ಎರಡು ಕಡೆಯಲ್ಲಿ ಗಾಯಗಳಾದರೆ, ಇನ್ನೋರ್ವನಿಗೆ ಒಂದು ಗಾಯವಾಗಿದೆ. ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಇದೇ ಸ್ಥಳದಲ್ಲಿ ಈ ಹಿಂದೆ ಆರ್ಎಸ್ಎಸ್ ನಾಯಕನ ಹತ್ಯೆ ನಡೆದಿತ್ತು ಎಂದು ವರದಿ ತಿಳಿಸಿದೆ.