ಜಮ್ಮು-ಕಾಶ್ಮೀರ, ಡಿ. 26 (DaijiworldNews/MB) : ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸೇನೆಯ ಬ್ಯಾರಕ್ (ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ ಓರ್ವರಿಗೆ ಗಾಯವಾಗಿದೆ.
ಮೃತ ಯೋಧರನ್ನು ಸೋನಿಪತ್ನ ಸುಬೇದರ್ ಎಸ್ ಎನ್ ಸಿಂಗ್ ಹಾಗೂ ಸಾಂಬಾದ ನಾಯಕ್ ಪರ್ವೇಝ್ ಕುಮಾರ್, ಗಾಯಗೊಂಡ ಯೋಧನನ್ನು ಸೆಪೊಯ್ ಮಂಗಲ್ ಸಿಂಗ್ ಎಂದು ಗುರುತಿಸಲಾಗಿದೆ.
ಯೋಧರು ಬ್ಯಾರಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಗೋಡೆ ಒಮ್ಮೆಲೇ ಕುಸಿದುಬಿದ್ದು ಮೂವರು ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಪೈಕಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ.