ಮುಂಬೈ,ಡಿ.25 (DaijiworldNews/HR): ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(ಬಿಎಆರ್ಸಿ) ಮಾಜಿ ಸಿಇಒ ಪರ್ಥೊ ದಾಸ್ಗುಪ್ತಾ ಅವರನ್ನು ಡಿ.28ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ದಾಸ್ಗುಪ್ತಾ ಅವರನ್ನು ಮುಂಬೈ ಪೊಲೀಸ್ ಅಪರಾಧ ವಿಭಾಗವು ಗುರುವಾರ ಬಂಧಿಸಿ ಶುಕ್ರವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಜನರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತೊಬ್ಬ ಆರೋಪಿ ಬಾರ್ಕ್ನ ಮಾಜಿ ಮುಖ್ಯ ನಿರ್ವಹಣಾ ಅಧಿಕಾರಿ(ಸಿಒಒ) ರಾಮಿಲ್ ರಾಮ್ಗಾರಿಯಾ ಅವರಿಗೆ ಗುರುವಾರ ಜಾಮೀನು ದೊರಕಿದೆ ಎಂದು ತಿಳಿದು ಬಂದಿದೆ.