ಅಮೆಥಿ, ಡಿ.25 (DaijiworldNews/HR): "ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯ ಬಗ್ಗೆ ರೈತರಿಗೆ ಸುಳ್ಳು ಹೇಳಿ ಮೊಸಳೆ ಕಣ್ಣೀರು ಸುರಿಸುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಹೇಳಿದ್ದಾರೆ.
ಈ ಕುರಿತು ಅಮೆಥಿಯಲ್ಲಿ ಇಂದು ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು,, "ರಾಹುಲ್ ಗಾಂಧಿಯವರು ಕೃಷಿ ಕಾಯ್ದೆಗಳ ಕುರಿತು ಸುಳ್ಳು ಸಂದೇಶಗಳನ್ನು ಹೇಳಿ ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ" ಎಂದರು.
ಇನ್ನು ರಾಹುಲ್ ಗಾಂಧಿ ಅವರು ರೈತ ಸಮಸ್ಯೆಗಳ ಕುರಿತು ಬಹಿರಂಗ ಚರ್ಚೆಗೆ ಬಂದು ತಾಕತ್ತಿದ್ದರೆ ರೈತರ ಮಧ್ಯೆ ಬಂದು ಚರ್ಚಿಸಲಿ ಆಗ ಅವರ ಬಣ್ಣ ಬಯಲು ಮಾಡುತ್ತೇನೆ" ಎಂದು ಹೇಳಿದ್ದಾರೆ.