ವಿಜಯಪುರ, ಡಿ.25 (DaijiworldNews/PY): "ನಗರದಲ್ಲಿ ನಿರ್ಮಾಣವಾಗಿರುವ ಭಾರತೀಯ ರಿಸರ್ವ್ ಪೊಲೀಸ್ ಕಛೇರಿಯ ಉದ್ಘಾಟನೆಗೆ ಜ.16ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯಪುರಕ್ಕೆ ಆಗಮಿಸಲಿದ್ದು, ರಾಜ್ಯದಲ್ಲಿ ಅಷ್ಟರಲ್ಲೇ ಸಾಕಷ್ಟು ಬದಲಾವಣೆಯಾಗಲಿದೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರದ ಹೈಕಮಾಂಡ್ ಉತ್ತಮವಾದ ತೀರ್ಮಾನ ಕೈಗೊಳ್ಳಲಿದೆ. ಜ.16ರಂದು ಅಮಿತ್ ಶಾ ಅವರು ಭಾರತೀಯ ರಿಸರ್ವ್ ಪೊಲೀಸ್ ಕಛೇರಿಯ ಉದ್ಘಾಟನೆಗೆ ವಿಜಯಪುರಕ್ಕೆ ಬರಲಿದ್ದು, ಅವರು ಬರುವ ಮೊದಲೇ ಸಾಕಷ್ಟು ಬದಲಾವಣೆ ಆಗಲಿದೆ" ಎಂದಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮಗಳ ಬ್ಯಾನರ್ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ಹಾಕದೇ ಇರುವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದು ಕೇಂದ್ರ ಸರ್ಕಾರದ ಕಾರ್ಯಕ್ರಮಗಳು. ಹಾಗಾಗಿ, ಬ್ಯಾನರ್ಗಳಲ್ಲಿ ಕೇಂದ್ರದ ನಾಯಕರ ಭಾವಚಿತ್ರವನ್ನು ಮಾತ್ರ ಹಾಕಲಾಗಿದೆ. ಸಿಎಂ ಬಿಎಸ್ಐ ಅವರು ನಮ್ಮ ಹೃದಯದಲ್ಲಿದ್ದಾರೆ" ಎಂದು ಹೇಳಿದ್ದಾರೆ.