ನವದೆಹಲಿ, ಡಿ.25 (DaijiworldNews/PY): "ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನವೇ ಅಮೇರಿಕಾದೊಂದಿಗಿನ ಹೊಸ ಸಂಬಂಧದ ಪ್ರಾರಂಭಕ್ಕೆ ಕಾರಣವಾಯಿತು" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದರು.
ಇಂದು ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನೋತ್ಸವದಂದು ಗೌರವ ಸಲ್ಲಿಸಿ ಮಾತನಾಡಿದ ಅವರು, "ವಾಜಪೇಯಿ ಅವರು ಹಲವು ದೇಶ, ಖಂಡಗಳನ್ನು ತಲುಪಿದ ಸಮರ್ಥ ನಾಯಕರಾಗಿದ್ದಾರೆ. ಅವರ ದೃಷ್ಟಿಕೋನದಿಂದ ಆಫ್ರಿಕಾ, ಯುರೋಪ್ ಅಮೇರಿಕಾ ಹಾಗೂ ಇತರ ದೇಶಗಳ ಜೊತೆ ಭಾರತ ಸೌಹಾರ್ದಯುತವಾದ ಸಂಬಂಧವನ್ನು ಕಾಯ್ದುಕೊಳ್ಳಲು ತಳಹದಿಯಾಗಿದೆ" ಎಂದರು.
"ವಾಜಪೇಯಿ ಅವರು 1998ರಲ್ಲಿ ಪೊಕ್ರಾನ್ ಪರಮಾಣು ಪರೀಕ್ಷೆ ಸಂಬಂಧ ವಿಚಾರವಾಗಿ ತೆಗೆದುಕೊಂಡ ತೀರ್ಮಾನ ಎಂದೆಂದಿಗೂ ಕೂಡಾ ಚಿರಸ್ಥಾಯಿ. ಭಯೋತ್ಪಾದನೆ ಹಾಗೂ ನಂಬಿಕೆ ಜೊತೆಯಾಗಿ ಇರಲು ಸಾಧ್ಯವೆ ಇಲ್ಲ ಎಂದು ನೆರೆಹೊರೆಯ ದೇಶಗಳಿಗೆ ಸ್ಪಷ್ಟವಾಗಿ ಅರ್ಥೈಯಿಸಿದ ಅವರು ಉತ್ತಮ ಬಾಂಧವ್ಯ ಹಾಗೂ ಸ್ನೇಹವನ್ನು ಹೊಂದಿದ್ದರು" ಎಂದು ಹೇಳಿದರು.