ಲಕ್ನೋ, ಡಿ.25 (DaijiworldNews/PY): "ರೈತ ಚಳುವಳಿಯು ಬಿಜೆಪಿ ಸರ್ಕಾರದ ವೈಫಲ್ಯದ ಸಂಕೇತವಾಗಿದೆ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೃಷಿ ಕಾಯ್ದೆ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯು ಇಂದು ಒಂದು ತಿಂಗಳು ಪೂರೈಸಿದೆ. ಬಿಜೆಪಿ ತನ್ನ ಆತ್ಮೀಯ ಶ್ರೀಮಂತ ಸ್ನೇಹಿತರಿಗಾಗಿ ಎಲ್ಲಾ ರೈತರ, ಕಾರ್ಮಿಕರ, ಕೆಳ ಹಾಗೂ ಮಧ್ಯಮ ವರ್ಗದವರ ವಿರುದ್ದವಾಗಿ ಹೋಗುತ್ತಿದೆ. ರೈತರ ಚಳುವಳಿಯು ಬಿಜೆಪಿ ಸರ್ಕಾರದ ವೈಫಲ್ಯದ ಜೀವಂತ ಸ್ಮಾರಕ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರೈತರು ಹರಿಯಾಣ, ಪಂಜಾಬ್ ಸೇರಿದಂತೆ ದೆಹಲಿಯ ಇತರ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.