ಬೆಂಗಳೂರು, ಡಿ.25 (DaijiworldNews/PY): "ಬಸನಗೌಡ ಪಾಟೀಲ್ ಯತ್ನಾಳ್ ಎಂದರೆ ಯಾರು?. ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ" ಎಂದು ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡಿದ ವಿಚಾರವಾಗಿ ಸದಾನಂದ ಗೌಡ ಕಿಡಿಕಾರಿದ್ದಾರೆ. "ಯಾರು ಯಾವ ವಿಚಾರವನ್ನು ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡಬೇಕು. ಆಗ ಮಾತ್ರ ಅಂತಹ ವಿಚಾರಕ್ಕೆ ನಿಜವಾದ ಅರ್ಥ ದೊರೆಯುತ್ತದೆ" ಎಂದಿದ್ದಾರೆ.
"ಯತ್ನಾಳ್ ಅವರು ಓರ್ವ ಶಾಸಕ ಮಾತ್ರ. ಅವರು ಹೇಳಿಕೊಳ್ಳುವ ಯಾವುದೇ ಸ್ಥಾನದಲ್ಲಿಲ್ಲ. ಅವರಿಗೆ ಏನಾದರೂ ಹೇಳೋದು ಇದ್ದಲ್ಲಿ ರಾಷ್ಟ್ರೀಯ ನಾಯಕರೊಂದಿಗೆ ಅಥವಾ ಪಕ್ಷದ ರಾಜ್ಯಾಧ್ಯಕ್ಷರೊಂದೊಗೆ ಮಾತನಾಡುವುದು ಉತ್ತಮ. ಇದರ ಬದಲು ಎಲ್ಲೋ ಬಂದಿ ಬೀದಿ ಬದಿ ಮಾತನಾಡಿ ಅವರ ಭವಿಷ್ಯದ ಬಗ್ಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ" ಎಂದು ತಿಳಿಸಿದ್ದಾರೆ.
"ಕೆಲವು ವಿಚಾರಗಳನ್ನು ಅವರವರೇ ಅರ್ಥ ಮಾಡಿಕೊಳ್ಳಬೇಕು. ಕೆಲವರು ತಮ್ಮ ಅಸ್ತಿತ್ವದ ಉಳಿವಿಗಾಗಿ ಮಾತನಾಡುತ್ತಾರೆ. ಇದು ನಿಜವಾಗಿಯೂ ಅವರಿಗೆ ಸರಿ ಎನಿಸುವುದಿಲ್ಲ" ಎಂದಿದ್ದಾರೆ.
"ಕೆಲವು ವಿಚಾರಗಳನ್ನು ಅವರವರೇ ಅರ್ಥ ಮಾಡಿಕೊಳ್ಳಬೇಕು. ಕೆಲವರು ತಮ್ಮ ಅಸ್ತಿತ್ವದ ಉಳಿವಿಗಾಗಿ ಮಾತನಾಡುತ್ತಾರೆ. ಇದು ನಿಜವಾಗಿಯೂ ಅವರಿಗೆ ಸರಿ ಎನಿಸುವುದಿಲ್ಲ" ಎಂದಿದ್ದಾರೆ.