ಬೆಂಗಳೂರು,ಡಿ.25 (DaijiworldNews/HR): ಸ್ಯಾಂಡಲ್ವುಡ್ನ ಕಂಠಿ, ಸಾಹೇಬ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಭರತ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ನಿರ್ದೇಶಕ ಭರತ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸು ಬಂದಿದೆ.
ನಟ ಶ್ರೀ ಮುರಳಿ ಹಾಗೂ ನಟಿ ರಮ್ಯ ಅಭಿನಯದ ಕಂಠಿ ಸಿನಿಮಾ ಹಾಗೂ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ 'ಸಾಹೇಬ' ಚಿತ್ರವನ್ನು ಭರತ್ ನಿರ್ದೇಶನ ಮಾಡಿದ್ದರು.
ಇನ್ನು ಯುವ ನಿರ್ದೇಶಕ ಭರತ್ ಅವರ ಅಕಾಲಿಕ ಮರಣಕ್ಕೆ ಅನೇಕ ನಟ ನಟಿಯರು ಸೇರಿದಂತೆ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.