ಇಟಾನಗರ,ಡಿ.25 (DaijiworldNews/HR): ಅರುಣಾಚಲ ಪ್ರದೇಶದಲ್ಲಿ ಜೆಡಿ(ಯು) ಪಕ್ಷದ ಆರು ಶಾಸಕರು ಆಡಳಿತರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆಂದು ಅರುಣಾಚಲ ಪ್ರದೇಶದ ವಿಧಾನಸಭೆ ಬಿಡುಗಡೆ ಮಾಡಿದ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಅರುಣಾಚಲ ಪ್ರದೇಶದ ಪಂಚಾಯತ್ ಮತ್ತು ಪುರಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವ ಒಂದು ದಿನ ಮುಂಚಿತವಾಗಿ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದ (ಪಿಪಿಎ) ಯ ಓರ್ವ ಶಾಸಕ ಮತ್ತು ಜೆಡಿ(ಯು)ನ ಆರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇನ್ನು ನವೆಂಬರ್ 26 ರಂದು ಜೆಡಿ(ಯು) ಪಕ್ಷವು ಜಿಕ್ಕೆ ಟಕೊ, ಡೊಂಗ್ರು ಸಿಯೊಂಗ್ಜು, ಡೋರ್ಜಿ ವಾಂಗ್ಡಿ ಖರ್ಮಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಡಿ ಅಮಾನತುಗೊಳಿಸಿತ್ತು.