ನವದೆಹಲಿ, ಡಿ.25 (DaijiworldNews/PY): ಹೊಸ ಸ್ವರೂಪದ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಭಾರತವು ಇಂಗ್ಲೆಂಡ್ನಿಂದ ವಂದೇ ಭಾರತ್ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, "ಭಾರತದ ವಂದೇ ಮಾತರಂ ಮಿಷನ್ನ ಎಂಟನೇ ಹಂತದ ಅಡಿಯಲ್ಲಿ 1,005 ಅಂತರಾಷ್ಟ್ರೀಯ ವಿಮಾನಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. ಹೀಗಾಗಿ 27 ದೇಶಗಳಿಂದ 40 ಲಕ್ಷಕ್ಕೂ ಅಧಿಕ ಜನರನ್ನು ಪುನಃ ಕರೆತರಲಾಗಿದೆ" ಎಂದಿದ್ದಾರೆ.
"ಈ ಕಾರ್ಯಾಚರಣೆಯ 8 ನೇ ಹಂತವು ಡಿಸೆಂಬರ್ 1 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ಹಂತದಲ್ಲಿ ಅಂದಾಜು 1.8 ಲಕ್ಷ ಜನರಿಗೆ ಅನುಕೂಲವಾಗುವಂತೆ 27 ದೇಶಗಳಿಂದ 1,005 ಅಂತರಾಷ್ಟ್ರೀಯ ವಿಮಾನಗಳನ್ನು ಕಾರ್ಯಚರಿಸಲಾಗಿದೆ. ಡಿಸೆಂಬರ್ 22 ರ ಹೊತ್ತಿಗೆ 40 ಲಕ್ಷಕ್ಕೂ ಹೆಚ್ಚು ಜನರಿಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಸೌಲಭ್ಯ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಪ್ರಯಾಣಕ್ಕೆ ಹೇರಲಾಗಿದ್ದ ನಿರ್ಬಂಧಗಳಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲುವ ಸಲುವಾಗಿ ವಂದೇ ಭಾರತ್ ಮಿಷನ್ ಮೇ ತಿಂಗಳಿನಲ್ಲಿ ಪ್ರಾರಂಭಿಸಲಾಗಿತ್ತು..