ನವದೆಹಲಿ, ಡಿ.25 (DaijiworldNews/PY): "ರಾಜಕೀಯ ಹಾಗೂ ರಾಷ್ಟ್ರ ಆಧಾರಿತ ಸಿದ್ದಾಂತದ ಮೂಲಕ ಭಾರತದಲ್ಲಿ ಅಭಿವೃದ್ದಿ ಹಾಗೂ ಕಲ್ಯಾಣ, ಉತ್ತಮ ಆಡಳಿತ ಯುಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರದ ಅವಧಿಯಲ್ಲಿ ಪ್ರಾರಂಭವಾದವು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅಟಲ್ ಜೀ ಅವರು ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ವಾಜಪೇಯಿ ಅವರ ಸ್ಮಾರಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅಟಲ್ ಜೀ ಅವರ ಆಲೋಚನೆಗಳು ಹಾಗೂ ದೇಶದ ಪ್ರಗತಿಗೆ ಅವರ ಸಮರ್ಪಣೆ ಯಾವಾಗಲೂ ಕೂಡಾ ರಾಷ್ಟ್ರದ ಸೇವೆಗೆ ನಮಗೆ ಶಕ್ತಿ ನೀಡುತ್ತದೆ" ಎಂದು ತಿಳಿಸಿದರು.
"ರಾಜಕೀಯ ಮತ್ತು ರಾಷ್ಟ್ರ ಆಧಾರಿತ ಸಿದ್ಧಾಂತದ ಮೂಲಕ ಭಾರತದಲ್ಲಿ ಅಭಿವೃದ್ಧಿ, ಕಲ್ಯಾಣ ಮತ್ತು ಉತ್ತಮ ಆಡಳಿತದ ಯುಗವನ್ನು ಪ್ರಾರಂಭಿಸಿದ ಪೂಜ್ಯ ಅಟಲ್ ಬಿಹಾರಿ ವಾಜಪೇಯಿ ಜಿ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅಟಲ್ ಜಿ ಅವರ ಕರ್ತವ್ಯ ಮತ್ತು ರಾಷ್ಟ್ರೀಯ ಸೇವೆ ಯಾವಾಗಲೂ ನಮಗೆ ಸ್ಫೂರ್ತಿಯ ಕೇಂದ್ರವಾಗಿರುತ್ತದೆ" ಎಂದರು.