ಹೊಸದಿಲ್ಲಿ, ಡಿ.25 (DaijiworldNews/HR): ಶೀಘ್ರದಲ್ಲಿ ಸಾಲ ಮಂಜೂರು ಮಾಡುವ ಅನಧಿಕೃತ ಡಿಜಿಟಲ್ ಆಪ್ಗಳ ತಂತ್ರಗಳಿಗೆ ಬಲಿಯಾಗಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಕ್ ಹೇಳಿಕೆ ನೀಡಿದೆ.
ದೇಶದಾದ್ಯಂತ ಅನಧಿಕೃತ ತ್ವರಿತ ಸಾಲ ವಂಚನೆಯ ಜಾಲಗಳು ಪತ್ತೆಯಾಗಿದ್ದು, ಇದೀಗ ರಿಸರ್ವ್ ಬ್ಯಾಂಕ್ ಈ ಹೇಳಿಕೆ ಹೊರಡಿಸಿದೆ. ಈ ಕಾರಣದಿಂದಾಗಿ ಕೆಲವು ವಾರಗಳ ಹಿಂದೆ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲ ಮರುಪಾವತಿ ಮಾಡುವಂತೆ ತೀವ್ರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇನ್ನು ಈ ಕುರಿತು ದಿಲ್ಲಿ, ಗುರುಗ್ರಾಮ ಮತ್ತು ಹೈದರಾಬಾದ್ನಿಂದ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿಜಿಟಲ್ ಹಾಗೂ ಆಪ್ಗಳ ಮೂಲಕ ಶೀಘ್ರ ಸಾಲ ಕೊಡಿಸುವುದಾಗಿ ಹೇಳಿ ಅಧಿಕ ಬಡ್ಡಿಯನ್ನು ವಿಧಿಸುತ್ತಾರೆ. ಬಳಿಕ ಸಾಲ ವಸೂಲಿ ಮಾಡಲು ಬಲವಂತದ ಮಾರ್ಗವನ್ನು ಅನುಸರಿಸುವುದ ಜೊತೆಗೆ ಸಾಲ ತೆಗೆದುಕೊಂಡವರ ಮೊಬೈಲ್ ಫೋನ್ ಗಳಲ್ಲಿನ ಮಾಹಿತಿಗಳನ್ನು ದುರ್ಬಳಕೆ ಮಾಡುತ್ತಾರೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.