ಗುವಾಹಟಿ, ಡಿ.25 (DaijiworldNews/HR): ಅಸ್ಸಾಂ ರಾಜ್ಯದಲ್ಲಿ ಎನ್ಆರ್ಸಿ ಪೂರ್ಣವಾಗಿಲ್ಲ, ಬರಾಕ್ ಕಣಿವೆಯಲ್ಲಿ ನೆಲೆಯಾಗಿರುವ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ ಎಂದು ಬಿಜೆಪಿ ಮುಖಂಡ, ಅಸ್ಸಾಂನ ಸಚಿವ ಹಿಮಂತಾ ಬಿಸ್ವಾ ಸರ್ಮಾ ಹೇಳಿದ್ದಾರೆ.
ಈ ಕುರಿತು ಬರಾಕ್ ಬರಾಕ್ ಕಣಿವೆಯ ಕರಿಮ್ಗಂಜ್ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಕಣಿವೆಯಲ್ಲಿ ನೆಲೆಸಿರುವ ಹಿಂದೂಗಳಿಗೆ ನ್ಯಾಯ ಒದಗಿಸುವು ಭರವಸೆ ನೀಡಿದ್ದು, ಹಿಂದೂಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾವು ಶೇ.90ರಷ್ಟು ಕೆಲಸ ಮಾಡಿದ್ದೇವೆ. ಆದರೆ ಮಾಜಿ ಸಂಯೋಜಕ ಪ್ರತೀಕ್ ಹಜೆಲಾರಿಂದಾಗಿ ಎನ್ಆರ್ಸಿ ಇನ್ನೂ ಪೂರ್ಣಗೊಂಡಿಲ್ಲ" ಎಂದರು.
ಇನ್ನು "ಅಸ್ಸಾಂ ರಾಜ್ಯದ ಎನ್ಆರ್ಸಿಯ ಮೊದಲ ಪಟ್ಟಿಯನ್ನು 2019ರ ಆಗಸ್ಟ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ 3.3 ಕೋಟಿ ಅರ್ಜಿದಾರರ ಪೈಕಿ 19.22 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದ್ದು, ಈ ಕುರಿತು ಬಿಜೆಪಿಯು ಟೀಕೆ ಮಾಡಿತ್ತು" ಎಂದು ಹೇಳಿದ್ದಾರೆ.