ನವದೆಹಲಿ, 25 (DaijiworldNews/MB) : ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ 9 ಕೋಟಿಗೂ ಅಧಿಕ ರೈತರಿಗೆ 18,000 ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ರೈತರಿಗೆ 18,000 ಕೋಟಿಯನ್ನು ಬಿಡುಗಡೆ ಮಾಡಿದ್ದು, ''ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ 9 ಕೋಟಿಗೂ ಅಧಿಕ ರೈತರ ಖಾತೆಗೆ ನೇರವಾಗಿ 18,000 ಕೋಟಿ ರೂ. ಜಮೆಯಾಗಿದೆ. ಇದುವೇ ಉತ್ತಮ ಆಡಳಿತ'' ಎಂದರು.
''ಪಶ್ಚಿಮ ಬಂಗಾಳದ ರೈತ ಮಿತ್ರರಿಗೆ ಮಾತ್ರ ಈ ಯೋಜನೆಯ ಲಾಭ ದೊರೆಯುತ್ತಿಲ್ಲ. ಅಲ್ಲಿನ ಸರ್ಕಾರ ರಾಜಕೀಯ ದುರುದ್ದೇಶದಿಂದಾಗಿ ರೈತರಿಗೆ ಪ್ರಯೋಜನ ಹಣ ದೊರೆಯುತ್ತಿಲ್ಲ. ಇದು ಅತೀ ಬೇಸರದ ವಿಷಯ'' ಎಂದು ಹೇಳಿದರು.