ಚೆನ್ನೈ, ಡಿ.25 (DaijiworldNews/PY): ಕಮಲ್ ಹಾಸನ್ ಆಪ್ತ, ಮಕ್ಕಳ್ ನಿಧಿ ಮಯ್ಯಯ್ ಪಕ್ಷದ ನಾಯಕ ಎ.ಅರುಣಾಚಲಂ ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಕೇಂದ್ರ ಸಚಿವ, ಬಿಜೆಪಿ ನಾಯಕ ಪ್ರಕಾಶ್ ಜಾವ್ಡೇಕರ್ ಸಮ್ಮುಖದಲ್ಲಿ ಚೆನ್ನೈನಲ್ಲಿ ಇಂದು ಎ ಅರುಣಾಚಲಂ ಅವರು ಬಿಜೆಪಿಗೆ ಸೇರ್ಪಡೆಯಾದರು.
ಎ. ಅರುಣಾಚಲಂ ಅವರು ಕಮಲ್ ಹಸನ್ ಅವರ ಮಕ್ಕಳ್ ನಿಧಿ ಮಯ್ಯಯ್ ಪಕ್ಷದಲ್ಲಿ ಪ್ರಮುಖರಾಗಿದ್ದರು. ಇದೀಗ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದು, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.