ನವದೆಹಲಿ, 25 (DaijiworldNews/MB) : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ಕಳೆದ 30 ದಿನಗಳಿಂದ ಸಿಂಗುವಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಈ ಪ್ರತಿಭಟನೆಯಲ್ಲಿ ಭಾಗಿಯಾಗಲೆಂದೇ ಪಂಜಾಬ್ ರೈತರೊಬ್ಬರು ಎರಡು ದಿನಗಳ ಕಾಲ 370 ಕಿ.ಮೀ ದೂರ ಸೈಕಲ್ ತುಳಿದು ಸಿಂಗು ಗಡಿಗೆ ಬಂದ ಘಟನೆ ನಡೆದಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮೊಗಾ ಜಿಲ್ಲೆಯ 36 ವರ್ಷದ ರೈತ ಸುಖ್ಪಾಲ್ ಬಜ್ವಾ, "ನಾನು ಸಿಂಗುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳಬೇಕಿತ್ತು. ಅದಕ್ಕಾಗಿ ನಾನು 370 ಕಿ.ಮೀ. ದೂರ ಸೈಕಲ್ನಲ್ಲಿ ಬಂದೆ ಎಂದು ಹೇಳಿದ್ದು, ಈ ಪ್ರತಿಭನೆಗೆ ಬೆಂಬಲಿಸುವುದು ಅತೀ ಮುಖ್ಯ. ಈ ಕಾಯ್ದೆ ರದ್ದುಗೊಳಿಸದಿದ್ದರೆ, ನಾನು ನನ್ನ ಜೀವನೋಪಾಯವನ್ನೇ ಕಳೆದುಕೊಳ್ಳಬೇಕಾಗುತ್ತದೆ'' ಎನ್ನುತ್ತಾರೆ.
''ನನ್ನಲ್ಲಿ ಬೇರೆ ಯಾವುದೇ ವಾಹನವಿಲ್ಲ. ದಿನನಿತ್ಯ ಏನೇ ಕೆಲಸವಿದ್ದರೂ ನಾನು ಸೈಕಲ್ನಲ್ಲೇ ಸಂಚರಿಸುತೇನೆ. ಆದರೆ ನನ್ನ ಊರು ಬಿಟ್ಟು ಇಷ್ಟು ದೂರ ಬಂದಿರುವುದು ಇದೇ ಮೊದಲು'' ಎಂದು ಹೇಳಿದ್ದಾರೆ.
''ನಾನು ಅಲ್ಲಲ್ಲಿ ನಿಲ್ಲಿಸಿ ಬಂದೆ. ಹಾಗಾಗಿ ತಲಪುವಾಗ ಎರಡು ದಿನವಾಯಿತು. ಹಾಗೆಯೇ ದಾರಿ ಮಧ್ಯೆ ಟಯರ್ ಪಂಚರ್ ಆಗಿದೆ. ಹಾಗಾಗಿ ತಡವಾಗಿದೆ. ಬೇರೆ ವಾಹನದಲ್ಲಿ ಬಂದಿದ್ದರೆ ಬೇಗ ತಲುಪಬಹುದಿತ್ತು'' ಎಂದು ಹೇಳಿದ್ದಾರೆ.