ಬೆಂಗಳೂರು, 25 (DaijiworldNews/MB) : ಕೊರೊನಾ ಸಾಂಕ್ರಾಮಿಕದ ಕಾರಣ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವರ್ಷದಲ್ಲಿ ಎರಡು ಬಾರಿ ಬದಲಾಗಿ ಒಂದು ತಿಂಗಳಲ್ಲಿ ಎರಡು ಬಾರಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೆಚ್ಚಿದ ಜನಸಂಖ್ಯೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯನ್ನು ಜನವರಿ 2021 ರಿಂದ ಜಾರಿಗೆ ತರಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಪ್ರತಿ ತಿಂಗಳು ಎರಡು ಶುಭ ಸಮಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು. 15 ದಿನಗಳ ಮುಂಚಿತವಾಗಿಯೇ ಜೋಡಿಯು ನೊಂದಣಿ ಮಾಡಬೇಕು ಎಂದು ತಿಳಿಸಿದರು.
ಜನವರಿ 15 ಮತ್ತು 20 ಮತ್ತು ಫೆಬ್ರವರಿ 20 ಮತ್ತು 23 ರಂದು ಸಾಮೂಹಿಕ ವಿವಾಹಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಸಚಿವರು ಹೇಳುತ್ತಾರೆ.
ಕಾರ್ಯಕ್ರಮದಲ್ಲಿ ವಧು, ಮದುಮಗ ಮತ್ತು ಅವರ ಪೋಷಕರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ ಎಂದು ಕೂಡಾ ತಿಳಿಸಿದ್ದಾರೆ.
ಈ ವರ್ಷದ ಏಪ್ರಿಲ್ 26 ಮತ್ತು ಮೇ 24 ರಂದು ಸರ್ಕಾರವು ರಾಜ್ಯದಾದ್ಯಂತ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಘೋಷಿಸಿತ್ತು. ಆದರೆ ಕೊರೊನಾ ಕಾರಣದಿದಿಂದಾಗಿ ಕಾರ್ಯಕ್ರಮವನ್ನು ಆರಂಭದಲ್ಲಿ ಜೂನ್ ಮತ್ತು ಜುಲೈಗೆ ಮತ್ತು ನಂತರ ನವೆಂಬರ್ ಮತ್ತು ಡಿಸೆಂಬರ್ಗೆ ಮುಂದೂಡಲಾಯಿತು. ಕನಿಷ್ಠ 250 ದಂಪತಿಗಳ ಮದುವೆ ನಡೆಸಲು ಸರ್ಕಾರ ಯೋಜಿಸಿತ್ತು.
ಈ ಯೋಜನೆಯಡಿ ಇತ್ತೀಚೆಗೆ ಕೇವಲ 23 ಜೋಡಿಗಳು ಮಾತ್ರ ವಿವಾಹವಾದರು. ನೋಂದಾಯಿತ ದಂಪತಿಗಳ ಮದುವೆಯನ್ನು ಸರ್ಕಾರಕ್ಕೆ ನಡೆಸಲು ಸಾಧ್ಯವಾಗದ ಕಾರಣ, ಅನೇಕ ಜೋಡಿಗಳು ಖಾಸಗಿ ಕಾರ್ಯಕ್ರಮ ನಡೆಸಿ ವಿವಾಹವಾದರು.
ಈ ಯೋಜನೆಯಂತೆ ವರನಿಗೆ ಶರ್ಟ್ ಮತ್ತು ಧೋತಿ ಜೊತೆಗೆ 5,000 ರೂ. ನಗದನ್ನು ಹಾಗೂ ವಧುವಿಗೆ ಸೀರೆ, 1,000 ರೂ ನಗದು ಮತ್ತು ಎಂಟು ಗ್ರಾಂ ತೂಕದ ಮಂಗಳಸೂತ್ರವನ್ನು ಸರ್ಕಾರ ನೀಡಲಿದೆ.