ಬೆಂಗಳೂರು, ಡಿ.25 (DaijiworldNews/MB) : ಕೊರೊನಾ ಸೋಂಕಿನ ಎರಡನೇ ಅಲೆ ದೇಶವನ್ನು ವ್ಯಾಪಿಸುವ ಸಾಧ್ಯತೆ ಹಾಗೂ ಯುಕೆಯಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ನ ಬಗ್ಗೆ ಗಂಭೀರ ಕಳವಳಗಳ ನಡುವೆಯೂ ತುರ್ತಾಗಿ ಕೊರೊನಾ ಲಸಿಕೆಯನ್ನು ಪಡೆಯುವತ್ತ ರಾಜ್ಯ ಸರ್ಕಾರ ಆಧ್ಯತೆ ನೀಡಿದೆ. ಪ್ರಸ್ತುತ ಸೂಚನೆಗಳ ಪ್ರಕಾರ ಕೊರೊನಾ ಲಸಿಕೆ ನೀಡಿಕೆ ಕಾರ್ಯವು ಜನವರಿ ಮೂರನೇ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.
ದಿನಪತ್ರಿಕೆಯೊಂದರ ಪ್ರಕಾರ, ಲಸಿಕೆ ನೀಡುವಿಕೆ ಕಾರ್ಯಕ್ಕಾಗಿ ಆಧುನಿಕ ಕ್ಷೇತ್ರ ವ್ಯಾಕ್ಸಿನೇಷನ್ ವಾಹನಗಳನ್ನು (ಟ್ರಕ್ಗಳನ್ನು) ಸಿದ್ಧಪಡಿಸಲಾಗುತ್ತಿದೆ. ಈ ವಾಹನಗಳಲ್ಲಿ ಫ್ರೀಜರ್-ಕಮ್-ವ್ಯಾಕ್ಸಿನೇಷನ್ ಕೊಠಡಿಗಳಿವೆ. ಮೊದಲು ಪ್ರಸ್ತಾಪಿಸಲಾಗಿರುವ 30 ಕೋಟಿ ಲಸಿಕೆಗಳಲ್ಲಿ ಕರ್ನಾಟಕಕ್ಕೆ 30 ಲಕ್ಷ ಯುನಿಟ್ ಸಿಗಲಿದೆ.
ಲಸಿಕೆ ಸಂಗ್ರಹ ಕೇಂದ್ರ ಘಟಕಗಳನ್ನು ಬೆಂಗಳೂರು ಮತ್ತು ಕಲಬುರಗಿಯಲ್ಲಿ ಸ್ಥಾಪಿಸಲಾಗಿದ್ದು, ಐದು ವಿಭಾಗೀಯ ಘಟಕಗಳನ್ನು ಗುರುತಿಸಲಾಗಿದೆ. ಈ ಘಟಕಗಳಿಂದ ಲಸಿಕೆಗಳನ್ನು ವೈದ್ಯಕೀಯ ಸಿಬ್ಬಂದಿ ಹೊಂದಿರುವ ಆಸ್ಪತ್ರೆಗಳ ವೈದ್ಯಕೀಯ ಕಾಲೇಜುಗಳಿಗೆ ಸಾಗಿಸಲು ಕ್ಷೇತ್ರ ವ್ಯಾಕ್ಸಿನೇಷನ್ ವಾಹನಗಳನ್ನು ಬಳಸಲಾಗುತ್ತದೆ.
ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಿರಿಯ ವೈದ್ಯರಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಇದಾದ ನಂತರ ಕಿರಿಯ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ದಾದಿಯರು ಮತ್ತು ಇತರ ಸಿಬ್ಬಂದಿಗಳು ಅವರನ್ನು ಪಡೆಯುತ್ತಾರೆ. ಬಳಿಕ ಪೊಲೀಸರು, ಆಶಾ ಕಾರ್ಯಕರ್ತರು ಮತ್ತು ನಾಗರಿಕ ಕಾರ್ಮಿಕರು ಲಸಿಕೆ ಪಡೆಯುತ್ತಾರೆ. ಈ ಎಲ್ಲಾ ಗುಂಪುಗಳಲ್ಲಿ, ಹಿರಿಯರಿಗೆ ಮೊದಲ ಆದ್ಯತೆ ಸಿಗುತ್ತದೆ.
ಸಾಂಕ್ರಾಮಿಕ ರೋಗ ಹೆಚ್ಚಾಗಿರುವ ನಗರಗಳಲ್ಲಿ ತುರ್ತು ವ್ಯಾಕ್ಸಿನೇಷನ್ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಮೊದಲು ಲಸಿಕೆಗಳನ್ನು ನೀಡಲಾಗುವುದು. ಬಳಿಕ ಕೊರೊನಾ ಪ್ರಮಾಣ ಅಧಿಕವಾಗಿರುವ ಮೈಸೂರು, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳಿಗೆ ಕೊರೊನಾ ಲಸಿಕೆ ನೀಡಲಾಗುವುದು.
ಡಿಸೆಂಬರ್ 23 ರ ವೇಳೆಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 2,55,331 ಸಿಬ್ಬಂದಿ, ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ 2,65,129 ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡದ 39,000 ಜನರು ಹಾಗೂ ಉಡುಪಿಯ 18,500 ಜನರು ಸೇರಿದ್ದಾರೆ