ಮೈಸೂರು, ಡಿ.25 (DaijiworldNews/MB) : ''ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ರಹಸ್ಯವಾಗಿ ಒಳ ಒಪ್ಪಂದ ಮಾಡಿಕೊಂಡಿದ್ದವು'' ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ''ಜೆಡಿಎಸ್ ಹಾಗೂ ಬಿಜೆಪಿ ಚಾಮುಂಡೇಶ್ವರಿ, ವರುಣಾ, ಬಾದಾಮಿ ಮೂರು ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಲಾಗಿತ್ತು. ಇದು ನೂರಕ್ಕೆ ನೂರು ಸತ್ಯವಾದದ್ದು'' ಎಂದು ದೂರಿದ್ದಾರೆ.
''ಜೆಡಿಎಸ್ ಹಾಗೂ ಬಿಜೆಪಿ ಸೇರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರನನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿತ್ತು. ಮೂರು ಕ್ಷೇತ್ರದ ಪೈಕಿ ಅವರು ಚಾಮುಂಡೇಶ್ವರಿಯಲ್ಲಿ ಯಶಸ್ವಿಯಾದರು, ಆದರೆ ಇನ್ನುಳಿದ ಎರಡು ಕಡೆ ಅವರ ತಂತ್ರ ಫಲಿಸಿಲ್ಲ'' ಎಂದಿದ್ದಾರೆ.
''ಮೂರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕೆಂದು ಅಶ್ವಥ್ ನಾರಾಯಣರು ತೀರ್ಮಾನಿಸುತ್ತಾರೆ. ಇದನ್ನು ಒಳ ಒಪ್ಪಂದವೆನ್ನದೆ ಬೇರೆ ಏನಾಂತರೆ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.