ಬೆಂಗಳೂರು, ಡಿ.25 (DaijiworldNews/MB) : ಮಾರ್ಚ್ನಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಒಂದು ಕೊರೊನಾ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ಗುರುವಾರ ತಿಳಿಸಿದೆ.
"ಇಡೀ ದಕ್ಷಿಣ ರಾಜ್ಯದಲ್ಲಿ, ಓರ್ವ 73 ವರ್ಷ ರೋಗಿಯೊಬ್ಬರು ಹಿಂದಿನ ದಿನ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಬುಲೆಟಿನ್ ಹೇಳಿದೆ.
ರೋಗಿಯನ್ನು ನವೆಂಬರ್ 30 ರಂದು ತೀವ್ರ ಉಸಿರಾಟದ ಸೋಂಕು (ಸಾರಿ) ಇದ್ದ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿತ್ತು. ಅವರಿಗೆ ಅಧಿಕ ರಕ್ತದೊತ್ತಡವು ಇತ್ತು ಎಂದು ತಿಳಿದು ಬಂದಿದೆ.
ಈ ಒಂದು ಕೊರೊನಾ ಸಾವು ಪ್ರಕರಣದೊಂದಿಗೆ ರಾಜ್ಯದಲ್ಲಿ ಕೊರೊನಾ ಸಾವು ಪ್ರಕರಣ 12,039 ಕ್ಕೆ ಮತ್ತು ಬೆಂಗಳೂರು ನಗರದಲ್ಲಿ ಕೊರೊನಾ ಸಾವು ಪ್ರಕರಣ 4,283 ಕ್ಕೆ ಏರಿದೆ.
ರಾಜ್ಯದಲ್ಲಿ ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಕೊರೊನಾ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಬುಧವಾರ 1,143 ಹೊಸ ಪ್ರಕರಣಗಳನ್ನು ವರದಿಯಾಗಿದೆ. ಪ್ರಸ್ತುತ 13,610 ಪ್ರಕರಣಗಳು ಸಕ್ರಿಯವಾಗಿದ್ದು ಇದು ಸೇರಿದಂತೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,13,483 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,268 ಮಂದಿ ಗುಣಮುಖರಾಗಿದ್ದು ಚೇತರಿಕೆ ಪ್ರಮಾಣವು 8,87,815 ಕ್ಕೆ ಏರಿದೆ.