ಬೆಂಗಳೂರು, ಡಿ.24 (DaijiworldNews/PY): "ಕೆಲವು ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆಯ ನಿಬಂಧನೆಗಳು ರೈತರ ಹಿತಾಸಕ್ತಿಗೆ ಎಷ್ಟು ನಿರ್ಬಂಧಿತವಾಗಿದೆಯೆಂದರೆ, ಕೃಷಿ ಉತ್ಪನ್ನಗಳ ಮಾರಾಟವು ಮಾರುಕಟ್ಟೆಯ ಹೊರಗೆ ನಡೆದಾಗಲೂ ಮಾರುಕಟ್ಟೆ ಶುಲ್ಕವನ್ನು ವಿಧಿಸಲಾಗುತ್ತಿರುವುದು ರೈತರ ಅನ್ನಕ್ಕೆ ಕಲ್ಲು ಹಾಕಿದಂತೆಯೇ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎಪಿಎಂಸಿ ಮಾರುಕಟ್ಟೆಗಳು ರಾಜಕೀಯ, ಭ್ರಷ್ಟಾಚಾರ, ಮಧ್ಯವರ್ತಿಗಳ ಕೇಂದ್ರವಾಗಿತ್ತು. ಮಾರುಕಟ್ಟೆ ಮತ್ತು ಕಮಿಷನ್ ಶುಲ್ಕಗಳನ್ನು ವ್ಯಾಪಾರಿಗಳಿಗೆ ವಿಧಿಸಿಯೂ, ರೈತರ ನಿವ್ವಳ ಆದಾಯದಿಂದ ಮತ್ತೊಂದಿಷ್ಟು ಶುಲ್ಕವನ್ನು ರೈತರಿಂದ ಸಂಗ್ರಹಿಸಲಾಗುತ್ತಿದೆ. ಈ ಅನ್ಯಾಯವನ್ನು ತಡೆಯಲು ರೈತ ಕಾಯ್ದೆ ಜಾರಿಗೊಳಿಸಲಾಗಿದೆ" ಎಂದಿದ್ದಾರೆ.
"ಕೆಲವು ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆಯ ನಿಬಂಧನೆಗಳು ರೈತರ ಹಿತಾಸಕ್ತಿಗೆ ಎಷ್ಟು ನಿರ್ಬಂಧಿತವಾಗಿದೆಯೆಂದರೆ, ಕೃಷಿ ಉತ್ಪನ್ನಗಳ ಮಾರಾಟವು ಮಾರುಕಟ್ಟೆಯ ಹೊರಗೆ ನಡೆದಾಗಲೂ ಮಾರುಕಟ್ಟೆ ಶುಲ್ಕವನ್ನು ವಿಧಿಸಲಾಗುತ್ತಿರುವುದು ರೈತರ ಅನ್ನಕ್ಕೆ ಕಲ್ಲು ಹಾಕಿದಂತೆಯೇ. ರೈತ ಕಾಯ್ದೆ ಇಂತಹ ಸುಲಿಗೆಗಳನ್ನು ನಿಷೇಧಿಸುತ್ತದೆ" ಎಂದು ತಿಳಿಸಿದ್ದಾರೆ.
"ಎಪಿಎಂಸಿ ಮಾರುಕಟ್ಟೆ ಮುಚ್ಚುವುದಿಲ್ಲ ಹಾಗೂ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ಕೂಡಾ ಮುಂದುವರೆಯಲಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದರು.