ಕಾಸರಗೋಡು, ಡಿ.24 (DaijiworldNews/MB) : ಡಿವೈಎಫ್ಐ ಕಾರ್ಯಕರ್ತ ಅಬ್ದುಲ್ ರಹಮಾನ್ರ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯೂತ್ಲೀಗ್ ಕಾರ್ಯಕರ್ತರಾದ ಇರ್ಷಾದ್, ಹಸನ್, ಇಸಹಾಕ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಅಬ್ದುಲ್ ರಹಮಾನ್ನ ಜೊತೆಗಿದ್ದ ಶುಹೈಬ್ನ ಮಾಹಿತಿಯನ್ನು ಕಲೆ ಹಾಕಲಾಗಿದೆ. ರಹಮಾನ್ನ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ತಡೆಯಲು ಯತ್ನಿಸಿದ್ದ ಶುಹೈಬ್ ಗಾಯಗೊಂಡಿದ್ದು, ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃತ್ಯಕ್ಕೆ ರಾಜಕೀಯ ದ್ವೇಷವೇ ಅಥವಾ ಇನ್ಯಾವುದೇ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಓರ್ವ ಆರೋಪಿಯಿಂದ ಕೂಡಲೇ ಮಾಹಿತಿ ಕಲೆ ಹಾಕಲಾಗುವುದು ಡಿ. ಶಿಲ್ಪಾ ತಿಳಿಸಿದ್ದಾರೆ.
ಕಣ್ಣೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತಿಶ್ಚ೦ದ್ರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ನಿನ್ನೆ ರಾತ್ರಿ ಕಾಞಂಗಾಡ್ನಲ್ಲಿ ಕೃತ್ಯ ನಡೆದಿತ್ತು. ಸ್ನೇಹಿತನ ಜೊತೆ ಬೈಕ್ನಲ್ಲಿ ತೆರಳುತ್ತಿದ್ದ ಅಬ್ದುಲ್ ರಹಮಾನ್ರನ್ನು ಎರಡು ಬೈಕ್ಗಳಲ್ಲಿ ಬಂದ ತಂಡ ಕೊಲೆಗೈದಿತ್ತು.