ನವದೆಹಲಿ, ಡಿ.24 (DaijiworldNews/PY): ಕೇಂದ್ರ ಸರ್ಕಾರದ ನೂತ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಿಸಾನ್ ಮಜ್ದೂರ್ ಸಂಘದ 60 ರೈತರ ನಿಯೋಗವು ಗುರುವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿದೆ.
ಈ ಸಂದರ್ಭ, "ರೈತರಿಗೆ ನಾವು ಬೆಂಬಲ ನೀಡಲು ಬಂದಿದ್ದೇವೆ. ನಾವು ನಮ್ಮ ಕೈಲಾದ ಸೇವೆಯನ್ನು ಅವರಿಗೆ ನೀಡುತ್ತೇವೆ" ಎಂದು ಬಾಸ್ಕೆಟ್ಬಾಲ್ ಆಟಗಾರ ಸತ್ಮಮ್ ಸಿಂಗ್ ಹೇಳಿದ್ದಾರೆ.
"ಕಳೆದ ಆರು ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸುವ ಪ್ರಯತ್ನಗಳು ನಡೆದಿವೆ. ರೈತರು ದಿನಾಂಕ ನಿಗದಿಪಡಿಸಿ ಮಾತುಕತೆಗೆ ಆಗಮಿಸಬೇಕು" ಎಂದು ಬುಧವಾರ ತೋಮರ್ ಹೇಳಿದ್ದರು.
ಈ ವೇಳೆ ರೈತ ಮುಖಂಡರು, "ಕೃಷಿ ಕಾಯ್ದೆಗಳಿಗೆ ಸಂಬಂಧಪಟ್ಟಂತೆ ಸ್ಪಷ್ಟವಾದ ಹಾಗೂ ಲಿಖಿತ ಪ್ರಸ್ತಾವನ್ನು ಮುಂದಿಟ್ಟಲ್ಲಿ ಮಾತ್ರವೇ ಸರ್ಕಾರದ ಜೊತೆ ಮಾತುಕತೆಗೆ ನಾವು ಸಿದ್ದ" ಎಂದಿದ್ದರು.
ಈ ಬಗ್ಗೆ ಮಾತುಕತೆ ನಡೆಸುವ ಸಲುವಾಗಿ ನರೇಂದ್ರ ಸಿಂಗ್ ತೋಮರ್ ಅವರನ್ನು ರೈತ ಮುಖಂಡರು ನವದೆಹಲಿಯ ಕೃಷಿ ಭವನದಲ್ಲಿ ಭೇಟಿಯಾಗಿದ್ದಾರೆ.