ತಿರುವನಂತಪುರ, ಡಿ.24 (DaijiworldNews/PY): ಪ್ರಧಾನಿ ಮೋದಿ ಅವರು ಜ.5ರಂದು ಕೊಚ್ಚಿ ಹಾಗೂ ಮಂಗಳೂರು ನಡುವಿನ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ನಿರ್ಮಿಸಿರುವ ಅನಿಲ ಕೊಳವೆ ಮಾರ್ಗವನ್ನು ಆನ್ಲೈನ್ ಮುಖೇನ ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಅನಿಲ ಕೊಳವೆ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅನುಮತಿ ನೀಡಿರುವ ವಿಚಾರವನ್ನು ತಿಳಿಸಿದರು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
2009ರಲ್ಲಿ ಸುಮಾರು 444 ಕಿ.ಮೀ ಉದ್ದದ ಈ ಮಾರ್ಗವನ್ನು ಅಳವಡಿಸು ಕಾರ್ಯ ಪ್ರಾರಂಭಗೊಂಡಿತ್ತು. ಈ ಯೋಜನೆಯು ಸುಮಾರು 2,915 ಕೋಟಿ. ರೂ.ವೆಚ್ಚದ್ದಾಗಿದ್ದು, 2014ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಸುರಕ್ಷತಾ ಕ್ರಮ ಸೇರಿದಂತೆ ಸ್ವಾಧೀನಪಡಿಸಿಕೊಂಡ ಭೂಮಿ ದರದ ಹೆಚ್ಚಳದಂತಹ ಅಡ್ಡಿಗಳ ಕಾರಣ ಈ ಯೋಜನೆನ್ನು ಪೂರ್ತಿ ಮಾಡಲು ಸಾಧ್ಯವಾಗಿಲ್ಲ.