ಗಂಗಾವತಿ, ಡಿ.24 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ಸ್ವಾತಂತ್ರ್ಯ ಚಳುವಳಿಯಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಮುಖಂಡ, ಪ್ರಗತಿಪರ ಚಿಂತಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರೈತರು ಕೃಷಿ ಮಸೂದೆಯನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ಸ್ವಾತಂತ್ರ್ಯ ಚಳುವಳಿಯಾಗಿದೆ, ರೈತರು ಎಚ್ಚತ್ತುಕೊಳ್ಳದಿದ್ದರೆ ದೇಶದ ಕೃಷಿ ವ್ಯವಸ್ಥೆಗೆ ಪೆಟ್ಟು ಬೀಳಲಿದ್ದು ಆಹಾರ ಸ್ವಾವಲಂಬನೆ ಆಹಾರ ಭದ್ರತೆ ಇಲ್ಲವಾಗುತ್ತದೆ " ಎಂದರು.
ಇನ್ನು "ಸಣ್ಣ ಹಿಡುವಳಿದಾರರು ಬೀದಿಗೆ ಬರುವುದು ಖಂಡಿತ, ಇರುವ ಭೂಮಿ ಎಲ್ಲಾ ಶ್ರೀಮಂತರು ಮತ್ತು ದೊಡ್ಡ ದೊಡ್ಡ ಕಾರ್ಪೋರೆಟ್ ಕಂಪನಿಗಳ ಪಾಲಾಗಲಿದ್ದು ರಾಜ್ಯ ಸರಕಾರ ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಖಾಸಗೀಕರಣವನ್ನು ಮಾಡುವ ಕೇಂದ್ರ ಸರಕಾರ ನೀತಿ ವಿರೋಧಿಸಬೇಕು" ಎಂದು ಹೇಳಿದ್ದಾರೆ.