ಕೊಲ್ಕತ್ತಾ, ಡಿ.24 (DaijiworldNews/HR): "ಯಾರಿಂದಲೂ ಪಶ್ಚಿಮ ಬಂಗಾಳವನ್ನು ನಾಶಪಡಿಸಲು ಸಾಧ್ಯವಿಲ್ಲ, ಬಂಗಾಳವನ್ನು ಎಂದಿಗೂ ಗುಜರಾತ್ ಆಗಲು ನಾವು ಅವಕಾಶ ನೀಡುವುದಿಲ್ಲ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಬಂಗಾಳ ಸಂಗೀತ ಮೇಳ 2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ, ಸಂಗೀತಗಾರರು ವಿಭಜನೆಯಲ್ಲಿ ನಂಬಿಕೆ ಹೊಂದಿಲ್ಲದಂತೆ ಮಾನವ ಜೀವನವನ್ನು ವಿಭಜಿಸುವುದಕ್ಕೆ ಪ್ರಯತ್ನ ಪಟ್ಟರೆ ಅದರಲ್ಲಿ ಯಶಸ್ವಿಯಾಗುವುದಿಲ್ಲ" ಎಂದರು.
ಇನ್ನು "ಪಶ್ಚಿಮ ಬಂಗಾಳವನ್ನು ವಿಭಜಿಸಲು ಯಾರಿಗೂ ಅವಕಾಶ ನೀಡಬೇಡಿ, ನಾವೆಲ್ಲ ಒಂದು ಕುಟುಂಬವಿದ್ದಂತೆ ಹಾಗಾಗಿ ಒಂದೇ ಮನಸ್ಥಿತಿಯಲ್ಲಿ ವಿಭಜನೆ ಮಾಡುವವರ ವಿರುದ್ಧ ಹೋರಾಟ ನಡೆಸೋಣ, ಯಾರು ಕೂಡ ಭಯ ಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.