ಬೆಂಗಳೂರು,ಡಿ.24 (DaijiworldNews/HR): ಡ್ರಗ್ಸ್ ಜಾಲದ ಆರೋಪದಲ್ಲಿ ಸಿನಿಮಾ ನಟ, ನಟಿಯರು ಮತ್ತು ಪ್ರಮುಖ ವ್ಯಕ್ತಿಗಳ ಬಂಧನ ಬಳಿಕ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಸುಮ್ಮನಿದ್ದು, ಇದೀಗ ಮತ್ತೆ ಕಾರ್ಯಚರಣೆ ಆರಂಭಿಸಿ ಮೂವರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಎಸ್ ಪಾಟೀಲ್, "ಆಫ್ರಿಕಾದ ಡ್ರಗ್ ಪೆಡ್ಲರ್ ಸೇರಿದಂತೆ ಒಟ್ಟು ಮೂರು ಜನರನ್ನು ಮಾದಕ ವಸ್ತು ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಸಾಕಷ್ಟು ಪ್ರಮಾಣದ ಡ್ರಗ್ಸ್ನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು ಬಂಧಿತರದಲ್ಲಿ ನೈಜೀರಿಯಾ ಮೂಲದ ಪ್ರಜೆ ಕೂಡ ಒಬ್ಬರಿದ್ದು, 5 ಲಕ್ಷ ರೂಪಾಯಿ ಮೌಲ್ಯದ 10 ಗ್ರಾಂ ಎಂಡಿಎಂಎ, ಕಾರು, ಬೈಕ್ ಮತ್ತು ನಗದುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.