ಕೊಯಂಬತ್ತೂರು, ಡಿ.24 (DaijiworldNews/HR): ಸೂಫಿಯುಂ ಸುಜಾದಯುಂ ಮಲಯಾಳಂ ಸಿನಿಮಾದ ಖ್ಯಾತ ನಿರ್ದೇಶಕ ನಾರಾಣಿಪ್ಪುಝ ಶಾನವಾಸ್ (40) ಅವರು ಹೃದಾಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಸಿನಿಮಾದ ಕಾರ್ಯನಿರ್ವಹಣೆ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿದ್ದು, ಬಳಿಕ ಮೆದುಳಿನ ಕಾರ್ಯವೂ ಸ್ಥಗಿತಗೊಂಡಿತ್ತು ಅವರನ್ನು ಕೋಯಂಬತ್ತೂರು ಕೆಜಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಬಳಿಕ ಮೆದುಳು ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಬುಧವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ದೇವ್ ಮೋಹನ್, ಜಯಸೂರ್ಯ ಮತ್ತು ಅದಿತಿ ರಾವ್ ಹೈದರಿ ನಟಿಸಿದ್ದ ಸೂಫೀಯುಂ ಸುಜಾದಯುಂ ಚಿತ್ರವು ಬಹಳ ಜನಪ್ರಿಯತೆ ಪಡೆದಿದ್ದು, 2015ರಲ್ಲಿ ಅವರು ನಿರ್ದೇಶಿಸಿದ್ದ 'ಕರಿ' ಸಿನಿಮಾ ಕೂಡ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.