ಮಂಗಳೂರು, ಡಿ. 23(DaijiworldNews/SM): ಮಾಜಿ ಸಚಿವ ಯು.ಟಿ.ಖಾದರ್ ಅವರ ಕಾರನ್ನು ಅಪರಿಚಿತರು ಹಿಂಬಾಲಿಸಿಕೊಂಡು ಬಂದಿರುವ ಘಟನೆ ನಡೆದಿದೆ. ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಅಪರಿಚಿತರು ಬೈಕ್ ನಲ್ಲಿ ಹಿಂಬಾಲಿಸಿಕೊಂಡಿದ್ದಾರೆ. ಸುಮಾರು ಹತ್ತು ಕಿ.ಮೀ. ವರೆಗೂ ಖಾದರ್ ಅವರ ಕಾರಿನ ಹಿಂದೆ ಅಪರಿಚಿತರು ಬಂದಿದ್ದು, ಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರಿಂದ ಬೈಕ್ ಗೆ ತಡೆದಿದ್ದಾರೆ.
ನಂತೂರು ಬಳಿ ಎಸ್ಕಾರ್ಟ್ ವಾಹನ ನಿಲ್ಲಿಸಿದ ಪೊಲೀಸರು ಬೈಕ್ ಬೆನ್ನಟ್ಟಿದ್ದಾರೆ. ಆದರೆ, ತಕ್ಷಣ ಎಚ್ಚೆತ್ತ ಬೈಕ್ ಸವಾರರು ಪರಾರಿಯಾಗಿದ್ದಾರೆ. ಈ ಬಗ್ಗೆ ಖಾದರ್ ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿ ನೀಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬೈಕ್ ನಂಬರ್ ನೋಟ್ ಮಾಡಿಕೊಂಡ ಪೊಲೀಸರು ವಿಳಾಸ ಪತ್ತೆಗಿಳಿದಿದ್ದಾರೆ. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ಆರಂಭಿಸಿದ್ದಾರೆ.
ಇನ್ನು ಬೆಂಗಳೂರಿಗೆ ತೆರಳಲು ಶಾಸಕ ಖಾದರ್ ದೇರಳಕಟ್ಟೆಯಿಂದ ಏರ್ ಪೋರ್ಟ್ ಗೆ ಪ್ರಯಾಣಿಸುತ್ತಿದ್ದರು.