ಮಂಗಳೂರು, ಡಿ. 23(DaijiworldNews/SM): ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರವನ್ನು ಜಾತಿ, ಧರ್ಮದ ಬಣ್ಣದಲ್ಲಿ ನೋಡಬಾರದು. ಯಾವುದೇ ಜಾತಿ, ಮತ, ಧರ್ಮಗಳು ರೋಗಕ್ಕಿಲ್ಲ. ಆದರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರೋಗಾಣು ಎಲ್ಲರಿಗೂ ಬಂದೇ ಬರುತ್ತದೆ. ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಪ್ರತಿಯೊಬ್ಬರ ಪ್ರಾಣ ಮುಖ್ಯವಾಗೊದೆ. ಡಬ್ಲ್ಯು ಹೆಚ್ ಒ ಮಾರ್ಗಸೂಚಿ ಪ್ರಕಾರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು. ಇನ್ನು ಡಬ್ಲ್ಯು ಹೆಚ್ ಒ ಪ್ರಕಾರ ಅತೀ ಹೆಚ್ಚು ದೇಶಗಳಲ್ಲಿ ಲಾಕ್ ಡೌನ್ ಮಾಡಬೇಕಾದ ಸ್ಥಿತಿಯಿದೆ. ಅಲ್ಲಿಯೂ ಕ್ರಿಸ್ಮಸ್ ಆಚರಣೆಗೆ ತೊಂದರೆಯಾಗಿದೆ. ರಾಜ್ಯದ ಜನರ ಜೀವದ ಬಗ್ಗೆ ಕಾಳಜಿ ವಹಿಸಿ ಸರ್ಕಾರ ಈ ನಿರ್ಧಾರ ಮಾಡಿದೆ ಎಂದರು.