ನವದೆಹಲಿ, ಡಿ.23 (DaijiworldNews/PY): "ಕೇಂದ್ರ ಸರ್ಕಾರವು ರೈತರೊಂದಿಗೆ ಸಂವೇದನಾಶೀಲತೆಯೊಂದಿಗೆ ಮಾತನಾಡುತ್ತಿದೆ. ರೈತರು ಶೀಘ್ರವೇ ಪ್ರತಿಭಟನೆಯನ್ನು ಕೈಬಿಡುತ್ತಾರೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ರೈತ ದಿನಾಚರಣೆ ಸಂದರ್ಭ ದೇಶದ ಎಲ್ಲಾ ಕೊಡುಗೆದಾರರಿಗೆ ನಾನು ಸ್ವಾಗತಿಸುತ್ತೇನೆ. ದೇಶಕ್ಕೆ ಅವರಿ ಆಹಾರ ಭದ್ರತೆಯನ್ನು ಒದಗಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಕೃಷಿ ಕಾನೂನುಗಳ ಬಗ್ಗೆ ಕೆಲವು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವರೊಂದಿಗೆ ಸರ್ಕಾರ ಸಂವೇದನಾಶೀಲತೆಯೊಂದಿಗೆ ಮಾತನಾಡುತ್ತಿದೆ. ಅವರು ಶೀಘ್ರದಲ್ಲೇ ತಮ್ಮ ಹೋರಾಟವನ್ನು ಹಿಂತೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಅವರ ಜನ್ಮ ದಿನಾರಣೆಯನ್ನು ನೆನಪಿಸಿಕೊಂಡ ರಾಜನಾಥ್ ಸಿಂಗ್, "ದೇಶದ ರೈತರ ಆದಾಯ ಹೆಚ್ಚಾಗಬೇಕು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕಬೇಕು. ಅಲ್ಲದೇ, ರೈತರ ಗೌರವ ಕಾಪಾಡಬೇಕು ಎನ್ನುವ ಉದ್ದೇಶ ಹೊಂದಿದ್ದರು. ಪ್ರಧಾನಿ ಮೋದಿ ಅವರು ಚೌದರಿ ಅವರಿಂದ ಸ್ಪೂರ್ತಿ ಪಡೆದುಕೊಂಡಿದ್ದು, ರೈತರ ಹಿತದೃಷ್ಟಿಯ ಹಿನ್ನೆಲೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಯಾವುದೇ ಸಂದರ್ಭದಲ್ಲಿಯಾದರೂ ಕೂಡಾ ರೈತರಿಗೆ ತೊಂದರೆಯಾಗಲು ಬಿಡಲಾರರು" ಎಂದು ಹೇಳಿದ್ದಾರೆ.