ನವದೆಹಲಿ, ಡಿ.23 (DaijiworldNews/PY): ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಅವರು ಮುಂಬೈನ ವಿಶೇಷ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅಪರಾಧಿಗಳಿಗೆ ಕಾರಾಗೃಹದಲ್ಲಿ ನೀಡಲಾಗುವ ಸಮವಸ್ತ್ರ (ಹಸಿರು ಸೀರೆ) ಧರಿಸುವುದರಿಂದ ವಿನಾಯಿತಿ ನೀಡುವಂತೆ ಕೋರಿದ್ದಾರೆ.
ಈ ಅರ್ಜಿಗೆ ಸಂಬಂಧಿದಂತೆ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ಬೈಕುಲ್ಲಾ ಜೈಲಿಗೆ ಸೂಚಿಸಿದೆ.
ಅರ್ಜಿಯಲ್ಲಿ, ನಾನು ವಿಚಾರಣಾಧೀನ ಖೈದಿಯಾಗಿದ್ದರೂ ಕೂಡಾ ನನಗೆ ಅಪರಾಧಿಗಳು ಧರಿಸುವ ಸಮವಸ್ತ್ರವನ್ನು ನೀಡಲಾಗುತ್ತಿದೆ ಎಂದು ಇಂದ್ರಾಣಿ ಉಲ್ಲೇಖಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಜ.5ರಂದು ನಡೆಯಲಿದೆ.
2012ರಲ್ಲಿ ಇಂದ್ರಾಣಿ ಜೊತೆಗೆ ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿಯ ಮಾಜಿ ಪತಿ ಸಂಜೀವ್ ಖನ್ನಾ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಶೀನಾಳನ್ನು ಹತ್ಯೆ ಮಾಡಿದ್ದರು.