ಬಲ್ಲಿಯಾ, ಡಿ.23 (DaijiworldNews/PY): "ಜನರು ಹೆಚ್ಚಿನ ಪ್ರಮಾಣದಲ್ಲಿ ಶೇಂದಿ ಸೇವಿಸಿದರೆ ಕೊರೊನಾ ಸೋಂಕು ತಗುಲುವುದಿಲ್ಲ" ಎಂದು ಬಹುಜನ ಸಮಾಜ ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಭೀಮ್ ರಾಜ್ಬ್ಹಾರ್ ಹೇಳಿದ್ದಾರೆ.
ಜಿಲ್ಲೆಯ ರಾಸ್ರಾದಲ್ಲಿ ಪಕ್ಷದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಪ್ರತಿರೋಧಕವನ್ನು ಹೆಚ್ಚಿಸುವ ಗುಣ ಶೇಂದಿಗಿದೆ. ಶೇಂದಿಯ ಪ್ರತಿ ಹನಿಯೂ ಕೂಡಾ ಗಂಗಾನದಿ ನೀರಿಗಿಂತ ಪರಿಶುದ್ಧವಾಗಿದೆ" ಎಂದಿದ್ದಾರೆ.
"ಹೆಚ್ಚಿನ ಪ್ರಮಾಣದಲ್ಲಿ ಜನರು ಶೇಂದಿ ಸೇವಿಸಿದರೆ ಅವರಿಗೆ ಕೊರೊನಾ ಸೋಂಕು ತಗುಲುವುದಿಲ್ಲ" ಎಂದಿದ್ದು, ಈ ವಿಚಾರವಾಗಿ ಅವರು ಯಾವುದೇ ವೈದ್ಯಕೀಯ ಪುರಾವೆಯನ್ನು ಕೂಡಾ ಉಲ್ಲೇಖಿಸಿಲ್ಲ.
ಈ ಸಂದರ್ಭ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂಪ್ರಕಾಶ್ ರಾಜ್ಬ್ಹಾರ್ ಅವರ ವಿರುದ್ದ ವಾಗ್ದಾಳಿ ನಡೆಸಿದ್ದು, "ತಮ್ಮ ಪಟ್ಟಭದ್ರ ಹಿತಾಸಕ್ತಿಗೋಸ್ಕರ ರಾಜ್ಬ್ಹಾರ್ ಸಮುದಾಯದ ಮಂದಿಯನ್ನು ದಾರಿ ತಪ್ಪಿಸುವ ಕಾರ್ಯವೆಸಗುತ್ತಿದ್ದಾರೆ. ಈ ರೀತಿಯಾದ ಜನರ ಬಗ್ಗೆ ನಾವು ಎಚ್ಚರ ವಹಿಸಬೇಕು" ಎಂದಿದ್ದಾರೆ.