ಜೈಪುರ, ಡಿ.23 (DaijiworldNews/MB) : ''ಮೋದಿ ಸರ್ಕಾರದ ಎಲ್ಲಾ ಸಚಿವರು ಕೂಡಾ ಕಾಮಿಡಿಯನ್ಗಳು'' ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಡೋಟಸರ ವ್ಯಂಗ್ಯವಾಡಿದ್ದಾರೆ.
''ರಾಜಸ್ತಾನದ ಅಶೋಕ್ ಗೆಹ್ಲೋಟ್ ಅವರ ಸರ್ಕಾರವನ್ನು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಉರುಳಿಸಲಿದ್ದಾರೆ'' ಎಂಬ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡೋಟಸರ, ''ಕೇಂದ್ರ ಸಚಿವ ರಾಮದಾಸ್ ಅಥಾವಳೆ ಒಂದು ಹೇಳಿಕೆ ಕೊಡುತ್ತಾರೆ. ಆದರೆ ಇತರೆ ಕೇಂದ್ರ ಸಚಿವರು ಬೇರೆಯೇ ಹೇಳಿಕೆ ನೀಡುತ್ತಾರೆ. ಅಷ್ಟಕ್ಕೂ ಅವರ ಹೇಳಿಕೆಯನ್ನು ನಾವು ಯಾರೂ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಯಾಕೆಂದರೆ ಮೋದಿ ಸರ್ಕಾರದ ಎಲ್ಲಾ ಸಚಿವರು ಕಾಮಿಡಿಯನ್ಗಳು'' ಎಂದು ಲೇವಡಿ ಮಾಡಿದ್ದಾರೆ.
''ಕಾಂಗ್ರೆಸ್ ಸರ್ಕಾರದಲ್ಲಿ ನಾವು ಒಗ್ಗಟ್ಟಾಗಿದ್ದೇವೆ, ಬಿಜೆಪಿ ಅವಿಶ್ವಾಸ ನಿರ್ಣಯ ಮಾಡಿದರೂ ಕೂಡಾ ನಾವು ಬಹುಮತ ಸಾಬೀತುಪಡಿಸುತ್ತೇವೆ'' ಎಂದು ಹೇಳಿದ ಅವರು, ''ಮೋದಿ ಸರ್ಕಾರ ಸುಳ್ಳು, ಅಹಂಕಾರದ ಸರ್ಕಾರ'' ಎಂದು ಕಿಡಿಕಾರಿದರು.