ಉತ್ತರ ಪ್ರದೇಶ, ಡಿ.23 (DaijiworldNews/PY): ಉತ್ತರಪ್ರದೇಶದ ಫುಲ್ಪುರ್ನ ಭಾರತೀಯ ರೈತ ರಸಗೊಬ್ಬರ ಕಾರ್ಖಾನೆ ಘಟಕದಲ್ಲಿ ಅನಿಲ ಸೋರಿಕೆ ಉಂಟಾಗಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.
ಘಟನೆ ಡಿ.23ರ ಬುಧವಾರ ಮುಂಜಾನೆ ನಡೆದಿದೆ. ಸದ್ಯ ಒಂದು ಘಟಕದ ಕಾರ್ಯಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ತಿಳಿಸಿದ ಪ್ರಯಾಗ್ ರಾಜ್ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಅವರು, "ರೈತ ರಸಗೊಬ್ಬರ ಕಾರ್ಖಾನೆ ಘಟಕದಲ್ಲಿ ಉಂಟಾದ ಅನಿಲ ಸೋರಿಕೆಯಿಂದ ಐಎಫ್ಎಫ್ಸಿಒನ 15 ಮಂದಿ ನೌಕರರು ಅಸ್ವಸ್ಥರಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅನಿಲ ಸೋರಿಕೆ ನಿಂತಿದೆ" ಎಂದು ತಿಳಿಸಿದ್ದಾರೆ.