ನವದೆಹಲಿ, ಡಿ.23 (DaijiworldNews/PY): "ಶೀಘ್ರವೇ ಪ್ರತಿಭಟನಾ ನಿರತ ರೈತರು ಪುನಃ ಮಾತುಕತೆಗೆ ಬರುವ ಭರವಸೆ ಇದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ತಿಳಿಸಿದ್ದಾರೆ.
ದೆಹಲಿ ಹಾಗೂ ಉತ್ತರಪ್ರದೇಶದ ರೈತಪರ ಸಂಘಟನೆಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, "ಭೇಟಿ ಮಾಡಲು ಬಂದಿದ್ದ ಕೆಲವು ರೈತ ಸಂಘಟನೆಗಳು, ಸರ್ಕಾರ ಜಾರಿಗೆ ತಂದ ಕಾನೂನುಗಳು ಉತ್ತಮವಾಗಿದೆ. ಅಲ್ಲದೇ, ಈ ಕಾನೂನು ಮುಂದುವರೆಯ ಬೇಕು. ಕಾನೂನುಗಳಿಗೆ ಯಾವುದೇ ರೀತಿಯಾದ ತಿದ್ದುಪಡಿ ಮಾಡದಂತೆ ಒತ್ತಾಯಿಸಲು ಆಗಮಿಸಿದ್ದರು" ಎಂದಿದ್ದಾರೆ.
"ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆಗಳು ಶೀಘ್ರದಲ್ಲೇ ಪುನಃ ಮಾತುಕತೆಗೆ ಬರುತ್ತಾರೆ ಎನ್ನುವ ಭರವಸೆ ಇದೆ. ಈ ವಿಚಾರವಾಗಿ ಪರಸ್ಪರ ಚರ್ಚೆ ನಡೆಸಿ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯ" ಎಂದು ಹೇಳಿದ್ದಾರೆ.