ಬೆಂಗಳೂರು, ಡಿ.22 (DaijiworldNews/MB) : ''ಗೋಹತ್ಯೆ ನಿಷೇಧ ಸಮರ್ಥಿಸಿ ಮಾತಾನಾಡುವ ಗೋವಾ ಉಸ್ತುವಾರಿ ಸಿ.ಟಿ. ರವಿಯವರು ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೆ?'' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಸಚಿವ ಸಿ.ಟಿ. ರವಿಯವರನ್ನು ಕುಟುಕಿದ್ದಾರೆ.
''ಕರ್ನಾಟಕದಲ್ಲಿ ಗೋಹತ್ಯೆಗೆ ನಿಷೇಧ ಹೇರಿ ಕಾನೂನು ರೂಪಿಸಿದ್ದರಿಂದ ಗೋವಾದಲ್ಲಿ ದನದ ಮಾಂಸಕ್ಕೆ ಕೊರತೆಯಾಗಿದೆ'' ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ತಿಳಿಸಿದ್ದರು. ಇದರ ವರದಿಯನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಗುಂಡೂರಾವ್ ಗೋವಾ ಉಸ್ತುವಾರಿ ಸಿ.ಟಿ. ರವಿಯವರ ಕಾಲೆಳೆದಿದ್ದಾರೆ.
''ಗೋಹತ್ಯೆ ನಿಷೇಧ ಸಮರ್ಥಿಸಿ ಮಾತಾಡುವ ಗೋವಾ ಉಸ್ತುವಾರಿ ಸಿ.ಟಿ. ರವಿಯವರು ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೆ? ಕರ್ನಾಟಕದಂತೆ ಗೋವಾದಲ್ಲೂ ಗೋ ಹತ್ಯೆ ನಿಷೇಧ ಮಾಡಿಸುವ ಧೈರ್ಯ ಸಿ.ಟಿ. ರವಿಯವರಿಗೆ ಯಾಕಿಲ್ಲ? ಇಲ್ಲಿ ಪೂಜ್ಯನೀಯವಾದ ಗೋವು ಗೋವಾದಲ್ಲೇನು?'' ಎಂದು ಟ್ವೀಟ್ ಮೂಲಕ ಗುಂಡೂರಾವ್ ಪ್ರಶ್ನಿಸಿದ್ದಾರೆ.