ಬೆಳಗಾವಿ, ಡಿ.22 (DaijiworldNews/MB) : ಬ್ರಿಟನ್ ದೇಶದಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದೆ. ಈ ನಡುವೆ ಲಂಡನ್ನಿಂದ ಮಹಿಳೆಯೊಬ್ಬರು ಬೆಳಗಾವಿಯ ಖಡೇಬಜಾರ್ಗೆ ಬಂದಿದ್ದು ಜನರಲ್ಲಿ ಭೀತಿ ಉಂಟಾಗಿದೆ.
ಡಿ.14ರಂದು ಬೆಂಗಳೂರಿನಿಂದ ಜಮಖಂಡಿಗೆ ಬಂದಿರುವ ಈ ಮಹಿಳೆಯು ಸೋಮವಾರ ರಾತ್ರಿ ಇಲ್ಲಿನ ತವರು ಮನೆಗೆ ಆಗಮಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಕೋವಿಡ್ ವಾರ್ ರೂಂನಿಂದ ಮಾಹಿತಿ ದೊರೆತ ಹಿನ್ನೆಲೆ ಆರೋಗ್ಯ ಇಲಾಖೆಯವರು ಮಹಿಳೆಯ ಮನೆಗೆ ತೆರಳಿ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಎಚ್ಒ ಡಾ.ಎಸ್.ವಿ. ಮುನ್ಯಾಳ, ''ತನ್ನ ತವರು ಮನೆಗೆ ಮಹಿಳೆ ಬಂದಿದ್ದು ಪ್ರಸ್ತುತ ಮಾರ್ಗಸೂಚಿಯ ಅನುಸಾರವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ತಿಳಿಸಲಾಗಿದೆ'' ಎಂದು ಹೇಳಿದ್ದಾರೆ.
''ಮಹಿಳೆಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಅವರು ಒಬ್ಬರೇ ಇಲ್ಲಿಗೆ ಬಂದಿದ್ದಾರೆ ಎಂದು ಮಾಹಿತಿ ಲಭಿಸಿದೆ'' ಎಂದು ಕೂಡಾ ಮಾಧ್ಯಮಕ್ಕೆ ತಿಳಿಸಿದ್ದಾರೆ.