ದೆಹಲಿ,ಡಿ.22 (DaijiworldNews/HR): ಬ್ರಿಟನ್ ದೇಶದಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ ಬ್ರಿಟನ್ನಿಂದ ಭಾರತಕ್ಕೆ ಬಂದ 266 ಮಂದಿ ಪ್ರಯಾಣಿಕರಲ್ಲಿ 5 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಸೋಮವಾರ ರಾತ್ರಿ ಬ್ರಿಟನ್ನಿಂದ ದೆಹಲಿಗೆ ಬಂದ ವಿಮಾನದಲ್ಲಿದ್ದ ಐವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರ ಪರೀಕ್ಷೆ ಮಾದರಿಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲಾಗುವುದಾಗಿ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೊರೊನಾ ಸೋಂಕು ಅತ್ಯಂತ ಬೇಗ ಹರಡುವ ಲಕ್ಷಣ ಹೊಂದಿರುವುದರಿಂದ ಡಿಸೆಂಬರ್ 31ರವರೆಗೆ ಬ್ರಿಟನ್ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಮಂಗಳವಾರ ಬ್ರಿಟನ್ನಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಅದರಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.