ಮುಂಬೈ,ಡಿ.22 (DaijiworldNews/HR): ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಮತ್ತು ಗಾಯಕ ಗುರು ರಾಂಧವ ಅವರನ್ನು ಮುಂಬೈ ಕ್ಲಬ್ಗೆ ದಾಳಿ ನಡೆಸಿ ಪೊಲೀಸರು ಬಂಧಿಸಿದ್ದು, ಬಳಿಕ ಇಬ್ಬರನ್ನೂ ಜಾಮೀನಿನಡಿ ಬಿಡುಗಡೆಗೊಳಿಸಲಾಯಿತು.
ವಿಮಾನ ನಿಲ್ದಾಣ ಬಳಿಯ ಡ್ರಾಗನ್ ಫ್ಲೈ ಕ್ಲಬ್ಗೆ ದಾಳಿ ನಡೆಸಿದ್ದು, ಈ ವೇಳೆ ಸುರೇಶ್ ರೈನಾ ಮತ್ತು ಗುರುರಾಂಧವ ಸೇರಿ 34 ಜನರನ್ನು ಬಂಧಿಸಲಾಗಿದೆ.
ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಸುರೇಶ್ ರೈನಾ ಮತ್ತು ಗುರು ರಾಂಧವ ಸೇರಿದಂತೆ 34 ಜನರನನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಏಳು ಮಂದಿ ಕ್ಲಬ್ ನ ಉದ್ಯೋಗಿಗಲಾಗಿದ್ದಾರೆ.
ಐಪಿಸಿ ಸೆಕ್ಷನ್ 188, 269, 34ರ ಅಡಿಯಲ್ಲಿ ಅವರ ವಿರುದ್ಧ ಕೇಸು ದಾಖಲಾಗಿದೆ.
ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಕ್ಲಬ್ ವ್ಯವಹಾರ ನಡೆಸುತ್ತಿದ್ದ ಕಾರಣ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.