ಠಾಣೆ, ಡಿ.22 (DaijiworldNews/HR): ನಕಲಿ ಫೇಸ್ಬುಕ್ ಖಾತೆಯನ್ನು ಮಹಾರಾಷ್ಟ್ರದ ಸಚಿವರೊಬ್ಬರ ಹೆಸರಿನಲ್ಲಿ ತೆರೆದು ಅದರಿಂದ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಪ್ರಿಲ್ 8 ರಂದು ಪ್ರಕರಣ ದಾಖಲಿಸಿ, ಇಲಾಖೆಯ ಸೈಬರ್ ವಿಭಾಗವು ತನಿಖೆಯನ್ನು ನಡೆಸುತ್ತಿದ್ದು ಇದೀಗ ಓರ್ವನನ್ನು ಬಂಧಿಸಿದ್ದಾರೆ.
ಈ ಪ್ರಕರಣದಡಿ ಔರಾಂಗಬಾದ್ ಜಿಲ್ಲೆಯ ವಾಲುಜ್ನಲ್ಲಿ 28 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಲು ಬಳಸಲಾಗಿದ್ದ ಫೋನನ್ನು ಪೊಲೀಸರು ವಶಕ್ಕೆ ಪಡಿದಿರುವುದಾಗಿ ಸೈಬರ್ ವಿಭಾಗದ ಇನ್ಸ್ಪೆಕ್ಟರ್ ಬಾಲಕೃಷ್ಣ ವಾಘ್ ಅವರು ತಿಳಿಸಿದ್ದಾರೆ.