ಕುಲ್ಗಾಮ್, ಡಿ.22 (DaijiworldNews/HR): ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಟೋಂಗ್ಡೌನುನಲ್ಲಿ ಭದ್ರತಾ ಪಡೆಗಳು ಮತ್ತು ಲಷ್ಕರ್-ಎ-ತೋಯ್ಬಾ (ಎಲ್ಇಟಿ) ಉಗ್ರ ಸಂಘಟನೆ ಮುಖಾಮುಖಿಯಾದ ವೇಳೆ ಎಲ್ಇಟಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳಿಗೆ ಶರಣಾಗತರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಉಗ್ರರು ಅಡಗಿ ಕುಳಿತಿರುವ ಮಾಹಿತಿಯ ಆಧಾರದ ಮೇಲೆ ಭದ್ರತಾಪಡೆಗಳು ಕುಲ್ಗಾಂ ಜಿಲ್ಲೆಯ ಟೋಂಗ್ಡೌನುನಲ್ಲಿ ಎನ್ಕೌಂಟರ್ ನಡೆಸಲು ಆರಂಭಿಸಿ, ಆ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಕಾರ್ಯಾಚರಣೆ ನಡೆಯುತ್ತಿರುವಾಗ, ಭಯೋತ್ಪಾದಕರ ಕುಟುಂಬಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಉಗ್ರರಿಗೆ ಮನವಿ ಮಾಡಿದರು.
ಲಷ್ಕರ್-ಎ-ತೋಯ್ಬಾಕ್ಕೆ ಸೇರಿದ ಇಬ್ಬರು ಭಯೋತ್ಪಾದಕರು ಪೊಲೀಸ್ ಮತ್ತು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದು, ಉಗ್ರರಿಂದ ಭದ್ರತಾಪಡೆಗಳು ಎರಡು ಪಿಸ್ತೂಲ್, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.