ಮಡಿಕೇರಿ, ಡಿ.21 (DaijiworldNews/MB) : ''ಸಿದ್ದರಾಮಯ್ಯ ಕೊಡವರು ಪೋರ್ಕ್ ತಿನ್ನುತ್ತಾರೆ ಹೇಳಲು ಹೋಗಿ ಬಾಯ್ತಪ್ಪಿ ಬೀಫ್ ಎಂದಿದ್ದಾರೆ'' ಎಂದು ಎ.ಐ.ಸಿ.ಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಸ್ಪಷ್ಟನೆ ನೀಡಿದರು.
''ಎಲ್ಲರೂ ತಪ್ಪು ಮಾಡುವುದು ಸಹಜ, ಆದರೂ ಕೆಲವರು ಗ್ರಾಮ ಪಂಚಾಯಿತಿ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ'' ಎಂದು ದೂರಿದರು.
''ಅವರು ಬಾಯಿ ತಪ್ಪಿ ಹೇಳಿದ್ದು ಅದಕ್ಕೆ ಅವರು ಸ್ಪಷ್ಟನೆಯೂ ನೀಡಿದ್ದಾರೆ, ವಿಷಾದವೂ ವ್ಯಕ್ತಪಡಿಸಿದ್ದಾರೆ'' ಎಂದು ಹೇಳಿದರು.