ಪಣಜಿ, ಡಿ.21 (DaijiworldNews/MB) : ''ಕರ್ನಾಟಕದಲ್ಲಿ ಗೋಹತ್ಯೆಗೆ ನಿಷೇಧ ಹೇರಿ ಕಾನೂನು ರೂಪಿಸಿದ್ದರಿಂದ ಗೋವಾದಲ್ಲಿ ದನದ ಮಾಂಸಕ್ಕೆ ಕೊರತೆಯಾಗಿದೆ'' ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
''ಗೋವಾ ರಾಜ್ಯಕ್ಕೆ ಕರ್ನಾಟಕದಿಂದಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ದನದ ಮಾಂಸ ಪೂರೈಕೆಯಾಗುತ್ತಿತ್ತು. ಆದರೆ, ಕರ್ನಾಟಕದಲ್ಲಿ ಒಮ್ಮೆಲೇ ಕಾನೂನು ರೂಪಿಸಿ ಗೋಹತ್ಯೆಗೆ ನಿಷೇಧ ಹೇರಿದ್ದರಿಂದ ಸಮಸ್ಯೆಯಾಗಿದೆ. ಪ್ರಸ್ತುತ ಮಾಂಸಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ಸೃಷ್ಟಿಯಾಗಿದೆ'' ಎಂದು ಹೇಳಿದರು.
''ನಾನು ಕೂಡಾ ಗೋಮಾತೆಯನ್ನು ಪೂಜಿಸುತ್ತೇನೆ. ಆದರೆ, ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಯೂ ಸಹ ನನ್ನ ಜವಾಬ್ದಾರಿ. ಅಲ್ಪಸಂಖ್ಯಾತರಿಗೆ ದನದ ಮಾಂಸ ನಿತ್ಯದ ಆಹಾರವಾಗಿದ್ದು ಅವರಿಗೆ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗುವುದು'' ಎಂದು ತಿಳಿಸಿದರು.