ನವದೆಹಲಿ, ಡಿ.21 (DaijiworldNews/MB) : ಬ್ರಿಟನ್ನಲ್ಲಿ ಹೊಸ ಪ್ರಭೇದದ ಕೊರೊನಾ ವೈರಸ್ ಕಾಣಿಸಿಕೊಂಡಿರುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಡಿಸೆಂಬರ್ 31ರವರೆಗೆ ಭಾರತಕ್ಕೆ ಬರುವ ಬ್ರಿಟನ್ ವಿಮಾನಗಳಿಗೆ ತಾತ್ಕಾಲಿಕ ನಿಷೇಧ ಹೇರಲು ಸೋಮವಾರ ತೀರ್ಮಾನಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ವಾಯುಯಾನ ಸಚಿವಾಲಯ, ಬ್ರಿಟನ್ನಲ್ಲಿ ಹೊಸ ಪ್ರಭೇದದ ಕೊರೊನಾ ವೈರಸ್ ಕಾಣಿಸಿಕೊಂಡಿರುವ ನಿಟ್ಟಿನಲ್ಲಿ ಭಾರತಕ್ಕೆ ಬರುವ ಎಲ್ಲ ವಿಮಾನಗಳನ್ನು ಡಿಸೆಂಬರ್ 31ರ ತನಕ ನಿಷೇಧಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದೆ.
ಇನ್ನು ಈ ನಿಷೇಧವು ಬುಧವಾರದಿಂದ ಆರಂಭವಾಗಲಿದೆ. ಹಾಗೆಯೇ ಇಂಗ್ಲೆಂಡ್ನಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು.