ಚಂಡೀಗಢ, ಡಿ.21 (DaijiworldNews/MB) : ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ನ 65 ವರ್ಷದ ರೈತ ದೆಹಲಿ-ಹರಿಯಾಣದ ಸಿಂಗು ಗಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ರೈತ ತಾರ್ನ್ ತರಣ್ ಮೂಲದ ನಿರಂಜನ್ ಸಿಂಗ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ಇದಕ್ಕೂ ಮೊದಲು ಸಿಖ್ ಪಾದ್ರಿ ಬಾಬಾ ರಾಮ್ ಸಿಂಗ್ ಅವರು ಡಿಸೆಂಬರ್ 16 ರಂದು ಸಿಂಗು ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಹರಿಯಾಣದ ಕರ್ನಾಲ್ ಜಿಲ್ಲೆಯ ಸಿಂಘ್ರ ಗ್ರಾಮದ ನಾನಕ್ಸಾರ್ ಗುರುದ್ವಾರಕ್ಕೆ ಸೇರಿದವರು.
''ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಕಷ್ಟವನ್ನು ತಾನು ನೋಡಲಾಗಲಿಲ್ಲ'' ಎಂದು ರೈತ ಡೆತ್ ನೋಟ್ನಲ್ಲಿ ಬರೆದಿದ್ದಾರೆ.