ಕೋಲ್ಕತ್ತ, ಡಿ.21 (DaijiworldNews/PY): ಬಿಜೆಪಿ ಸಂಸದ ಸೌಮಿತ್ ಖಾನ್ ಅವರ ಪತ್ನಿ ಸುಜಾತ ಮೊಂಡಲ್ ಖಾನ್ ಅವರು ಸೋಮವಾರ ಟಿಎಂಸಿಗೆ ಸೇರ್ಪಡೆಗೊಂಡರು.
ಸುಜಾತ ಮೊಂಡಲ್ ಅವರು, ಟಿಎಂಸಿ ಸಂಸದ ಸೌಗತ್ ರಾಯ್ ಹಾಗೂ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರ ನೇತೃತ್ವದಲ್ಲಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತಮಾಡಿದ ಅವರು, "ಪತಿಗೆ ನಾನು 2019ರ ಲೋಕಸಭಾ ಚುನಾವಣೆಯಲ್ಲಿ ಜಯ ಸಿಗಲು ಶ್ರಮಿಸಿದ್ದೆ. ಆದರೆ, ನನಗೆ ಬಿಜೆಪಿಯಲ್ಲಿ ಸರಿಯಾದ ಮಾನ್ಯತೆ ದೊರಕಿಲ್ಲ. ನಿಷ್ಠಾವಂತರ ಬದಲು ನೂತನವಾಗಿ ಸೇರ್ಪಡೆಯಾದ ಹಾಗೂ ಭ್ರಷ್ಟ ನಾಯಕರಿಗೆ ಬಿಜೆಪಿಯಲ್ಲಿ ಹೆಚ್ಚು ಪ್ರಾಶಸ್ತ್ಯ" ಎಂದಿದ್ದಾರೆ.
"ಚುನಾವಣೆಯಲ್ಲಿ ಪತಿಗೆ ಜಯ ಸಿಗಲು ನಾನು ಬಹಳ ತ್ಯಾಗ ಮಾಡಿದ್ದೆ. ಆದರೆ, ಇಷ್ಟೆಲ್ಲಾ ಮಾಡಿದರೂ ಕೂಡಾ ನನಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನಾನು ಮಮತಾ ಬ್ಯಾನರ್ಜಿ ಹಾಗೂ ಅಣ್ಣ ಅಭಿಷೇಕ್ ಬ್ಯಾನರ್ಜಿ ಅವರ ಜೊತೆ ಕಾರ್ಯ ನಿರ್ವಹಿಸಲು ಇಚ್ಛಿಸುತ್ತೇನೆ" ಎಂದು ಹೇಳಿದ್ದಾರೆ.
"ತಮ್ಮ ಭವಿಷ್ಯವನ್ನು ಸೌಮಿತ್ರ ಖಾನ್ ಅವರು ತೀರ್ಮಾನ ಮಾಡಲಿ. ಅವರಿಗೆ ಈ ಬಗ್ಗೆ ಅರಿವಾಗಲಿದೆ. ಆ ದಿನ ಅವರು ಟಿಎಂಸಿಗೆ ಬರಲಿದ್ದಾರೆ" ಎಂದಿದ್ದಾರೆ.